Friday, 29 July 2011

ಗೀತ ಸಂಗೀತ

ಚಿತ್ರ: ಗೀತ
ಹಾಡಿದವರು: ಎಸ್ ಪಿ ಬಾಲು


ಗೀತ ಸಂಗೀತ ಏಕೆ ಹೀಗೆ ದೂರವಾದೆ....ಎಲ್ಲಿ ಹೋದೆ
ನಯನವ ಸೆಳೆದ ಗೀತ ನನ್ನ ಕನಸಲಿ ಕುಣಿದ ಗೀತ
ನನ್ನ ಮನವನು ಅರಿತ ಗೀತ ನನ್ನ ಉಸಿರಲಿ ಬೆರೆತ ಗೀತ.....

ನಗಲು ನೀನು ಹೂವಂತೆ ನುಡಿವ ಮಾತು ಹಾಡಂತೆ
ಬಳಿಗೆ ಬಂದೆ ಮಿಂಚಂತೆ ಮರೆತು ಹೋದೆ ನಾ ಚಿಂತೆ
ಚೆಲುವೆಯ ಸ್ನೇಹವೇನೋ ಒಲವಿನ ಭಾವವೇನೋ
ಪ್ರಣಯದ ಕವಿತೆ ಏನೋ ಕಲಿಸಿದೆ ಬಂದು ನೀನು....ಗೀತ

ಹರುಷ ಕಂಡೆ ಕಣ್ಣಲ್ಲಿ ಸರಸ ಕಂಡೆ ಮಾತಲ್ಲಿ
ಸೊಗಸ ಕಂಡೆ ನಿನ್ನಲ್ಲಿ ಸುಖವ ತಂದೆ ಬಾಳಲ್ಲಿ
ಬೀಸುವ ಗಾಳಿಯಂತೆ ಓಡಿದೆ ನಿಲ್ಲದಂತೆ 
ನೆನಪಲಿ ನೀನು ನಿಂತು ಆದೆಯ ವಿರಹ ಗೀತೆ.....ಗೀತ

Wednesday, 27 July 2011

ಕೇಳದೆ ನಿಮಗೀಗ ದೂರದಲ್ಲಿ ಯಾರೋ

ಚಿತ್ರ: ಗೀತ
ಸಂಗೀತ:ಇಳೆಯರಾಜ್
ಹಾಡಿದವರು: ಎಸ್ ಪಿ ಬಾಲು

ಕೇಳದೆ ನಿಮಗೀಗ ದೂರದಲ್ಲಿ ಯಾರೋ ಹಾಡು ಹೇಳಿದಂತೆ
ಒಂದು ಹೆಣ್ಣಿನ... ಓ..... ನೊಂದ ವಿರಹ ಗೀತೆ

ಸಂಪಿಗೆ ಒಂದೂರು ಮಲ್ಲಿಗೆ ಒಂದೂರು, ನಡುವಲ್ಲಿ ನದಿಯೊಂದು
ಹಗ್ಗದ ಉಯ್ಯಾಲೆ ತೂಗುವ ಹಾಗೊಂದು, ಸೇತುವೆಯು ಅಲ್ಲೊಂದು
ಈ ಊರ ಚೆಲುವೆ ಆ ಊರ ಚೆಲುವ, ನದಿಯಂಚಲಿ ಓಡಾಡುತ ಎದುರಾದರು ಒಮ್ಮೆ

ಚೆಲುವೆಯ ಕಂಡಾಗ ಚೆಲುವನ ಮನದಲ್ಲಿ ನೂರಾಸೆ ಬಂದಾಗ
ಚೆಲುವೆಯ ಕಣ್ಣಲ್ಲಿ ಚೆಲುವನು ಮನೆಮಾಡಿ ಶಿಲೆಯಂತೆ ನಿಂತಾಗ
ಹೂವಾಗಿ ಮನಸು ನೂರಾರು ಕನಸು ಬೆರಗಾದರು ಒಲವಿಂದಲಿ ಒಂದಾದರು ಆಗ........

ಚೆಲುವೆಯ ಮಾವಯ್ಯ ಒಲವಿನ ಕತೆ ಕೇಳಿ ಹುಲಿಯಂತೆ ಎಗರಾಡಿ
ಸೇತುವೆ ಬಳಿ ಬಂದಾಗ ಪ್ರೇಮಿಗಳ ಕಂಡಾಗ ರೋಷದಲಿ ಕೂಗಾಡಿ
ಹಲ್ಲನ್ನು ಮಸೆದ ಸೇತುವೆಯ ಕಡಿದ
ಆ ಜೋಡಿಯ ಕತೆಯಂದಿಗೆ ಕೊನೆಯಾಯಿತು ಹೀಗೆ........

ಜೊತೆಯಲಿ ಜೊತೆ ಜೊತೆಯಲಿ

ಗೀತ ಚಿತ್ರದ ಗೀತೆ
ಸಂಗೀತ:ಇಳೆಯರಾಜ್
ಸಾಹಿತ್ಯ :ಚಿ .ಉದಯಶಂಕರ್
ಗಾಯನ :ಎಸ್.ಪಿ.ಬಾಲಸುಬ್ರಮಣ್ಯಂ

ಜೊತೆಯಲಿ  ಜೊತೆ  ಜೊತೆಯಲಿ  ಇರುವೆನು  ಹೀಗೆ  ಎಂದು
ಜೊತೆ  ಜೊತೆಯಲಿ  ಇರುವೆನು  ಇನ್ನು ಎಂದು
 ಎಂಥ  ಮಾತಾಡಿದೆ ಇಂದು   ನೀ
ಎಂಥ  ಮಾತಾಡಿದೆ ನನ್ನ  ಮನಿಸಿನ  ಭಾವನೆ  ನೀನೆ  ಹೇಳಿದೆ
ಜೊತೆಯಲಿ  ಜೊತೆ  ಜೊತೆಯಲಿ  ಇರುವೆನು  ಹೀಗೆ  ಎಂದು

 ಪ್ರೀತಿ ಎಂದರೇನು  ಎಂದು  ಈಗ  ಅರಿತೆನು (2)
ಸವಿನುಡಿಯಲಿ  ತನು  ಅರಳಿತು
ಸವಿಗನಸಲಿ  ಮನ  ಕುಣಿಯಿತು
ಒಲವಿನಾ  ಈ  ಮಾತಿಗೆ
ಕರಗಿ  ಹೋದೆ  ನೋಟಕೆ
ಕೊಡುವೆ  ನಿನಗೆ  ಬಾ  ಪ್ರೀತಿ  ಕಾಣಿಕೆ  ಜೊತೆಯಲಿ ....


ಮೋಡದಲ್ಲಿ  ಜೋಡಿಯಾಗಿ  ತೇಲಿ  ನಲಿಯುವ  (2)
ಹಾರಾಡುವ  ಅರಗಿಳಿಗಳ
ಮಾತಾಡಿಸಿ ಮುದ್ದಾಡುವ
ಕಾಮನಾ  ಬಿಲ್ಲೇರುವ
ಜಾರುತಾ   ನಾವಾಡುವ
ಹಗಲು  ಇರುಳು  ಒಂದಾಗಿ  ಹಾಡುವ  ಜೊತೆಯಲಿ.....

Tuesday, 26 July 2011

ನಲಿವ ಗುಲಾಬಿ ಹೂವೆ

 ಆಟೋ ರಾಜ ಚಿತ್ರದ ಗೀತೆ
ಹಾಡಿದವರು : ಎಸ್.ಪಿ.ಬಾಲಸುಬ್ರಮಣ್ಯಂ


ನಲಿವ ಗುಲಾಬಿ ಹೂವೆ ಮುಗಿಲ ಮೇಲೇರಿ ನಗುವೇ
ನಿನಗೆ ನನ್ನಲ್ಲಿ ಒಲವೋ ಅರಿಯೇ ನನ್ನಲ್ಲಿ ಛಲವೋ....
ನಲಿವ ಗುಲಾಬಿ ಹೂವೆ ಒಲವೋ ಛಲವೋ.....

ಸುಳಿದೆ ತಂಗಾಳಿಯಂತೆ ನುಡಿದೆ ಸಂಗೀತದಂತೆ
ಒಲವಿನ ಬಲೆಯಲಿ ಸೆಳೆಯುತ ಕುಣಿದೆ ಸೊಗಸಾಗಿ ಹಿತವಾಗಿ
ಮನವ ನೀ ಸೇರಲೆಂದೆ ಬಯಕೆ ನೂರಾರು ತಂದೆ
ಬಯಸದೆ ಬಳಿಯಲಿ ಸುಳಿಯುತ ಒಲಿದೆ, ಇಂದೇಕೆ ದೂರಾದೆ?
ಹೀಗೇಕೆ ಮರೆಯಾದೆ?....

ಸುಮವೇ ನೀ ಬಾಡದಂತೆ ಬಿಸಿಲ ನೀ ನೋಡದಂತೆ
ನೆರಳಲಿ ಸುಖದಲಿ ನಗುತಿರು ಚೆಲುವೆ ಎಂದೆಂದೂ ಎಂದೆಂದೂ
ಇರು ನೀ ಹಾಯಾಗಿ ಹೀಗೆ ಇರಲಿ ನನಗೆಲ್ಲ ಬೇಗೆ
ಕನಸಲಿ ನೋಡಿದ ಸಿರಿಯನು ಮರೆವೇ ನಿನಗಾಗಿ ನನಗಾಗಿ.....